The Prema Dasa of Mantralaya

Abhinava Janardhana Vittala Dasa is an important Haridasa of Karnataka. A great devotee of  Rayaru or Raghavendra Swamy, he has composed some of the most evocatve and beautiful songs on Rayaru, his Mahime and Mantralaya.

He was a disciple of Jagannatha Dasa. This dasa is also known as Prema Dasa of Somapura. He has composed many krithis on Rayaru which are very popular.

One of the most well-known songs on Raghavendra Swamy is Tunga Teeradi.

Here are some of  the songs by this Dasa

 

Poreyabeekanu…..

 

ಪೊರೆಯಬೇಕೆನ್ನ ರಾಘವೇ೦ದ್ರ ಗುರುವೆ ಪಾವನ್ನ
ಶರಣನೆ೦ದು ನಿನ್ನ ಶರಣುಹೊಕ್ಕೆನಾ ಕರುಣಿ        || ಪ ||

ಸದಮಲಕಲಾಗ್ರಣಿ ಸುಧೀ೦ದ್ರಯತಿ ಪಾಣಿ
ಪದುಮದಿ೦ದ ಜನಿಸಿದ ದಿವ್ಯಘನ ಮೌನಿ
ಹೃದಯಾಬ್ಜದಲ್ಲಿ ಹರಿಯ ಪಾದ
ಪದುಮಾದರದಲಿ ಬಲುಪರಿನವ
ವಿಧಭಕುತಿಯಲ್ಲಿ ಪೂಜಿಸುವಾ ಸುಗುಣ
ವೊದಗಿ ನಿನ್ನ ಧ್ಯಾನ ಸ್ನೇಹದ ಬಗೆಬಲ್ಲಿ          || ೧ ||

ಜನನಿ ಜನಕರು ತಮ್ಮ ತನುಜಾನು ತಿಳಿಯದೆ
ಅನುಚಿತ ಕಾರ್ಯವಾ ಅನುಸರಿಸಲು ಅವನ
ಕನುಕಾರ ಬಿಟ್ಟು ಅವನ ನಡತೆ
ಮನಸಿನೊಳಿಟ್ಟು ಪೋಷಿಸದಲೆ
ಮುನಿದಿನ್ನು ಸಿಟ್ಟು ಮಾಡುವರೇನೂ
ಅನಘ ತ್ವದ್ದಾಸನ ಘನದಯವಿಟ್ಟೂ                  || ೨ ||

ಹಲವು ಮಾತೇನು ಶ್ರೀ ನಿಲಯಾನನುಗ್ರಹ
ಬಲದಿ ವ್ಯಾಪಾರವ ಅಭಿನವಜನಾರ್ಧನವಿ
ಠ್ಠಲನ ಭಕ್ತ ಭಕುತಿ ಜ್ಞಾನ ವಿರಕುತಿ ಇತ್ತು
ಸಲಹಬೇಕಯ್ಯ ಕರುಣಿಸಿ ಆರ್ತಜನರನು       || ೩ ||

 

Guru Raghavendra Charana

 

 

ಗುರುರಾಘವೇ೦ದ್ರತ್ವಚ್ಚರಣ ಭಜಿಸುವವರ ಭವ
ಶರಧಿ ದಾಟಿಸಿ ಇಹಪರಸೌಖ್ಯ ಕೊಡುವೆ – ಗುರು ರಾಘವೇ೦ದ್ರ        || ಅ ||

ಎಲ್ಲ ಕಾಶಿ ಪ್ರಯಾಗ ಎಲ್ಲಿ ಗಯಾ ಸೇತುಮ
ತ್ತೆಲ್ಲಿ ವೆ೦ಕಟಗಿರಿ ಕ೦ಚಿಯಿ೦ದಾ
ಎಲ್ಲೆಲ್ಲಿ ದೇಶದವರೆಲ್ಲ ಜನರು ಬ೦
ದಿಲ್ಲೆ ಸೇವಿಸಲು ಫಲ ನಿಲ್ಲದಲೆ ಕೊಡುವೆ – ರಾಘವೇ೦ದ್ರಾ         || ೧ ||

ಆವ ದೇಶದಲ್ಲಿ ಆವಾಸ ಮಾಡಿ ವೃ೦
ದಾವನದಿ ಮೆರೆವೆ ಭಕ್ತಾವಳಿಗಳಾ
ಆವಾವ ಯೊಗ್ಯತೆಯು ಆವರ್ಗೆ ಇಹುದು ತಿಳಿ
ದಾವಾವು ಗತಿಗಳನು ಕೊಡುವೆ – ಗುರು ರಾಘವೇ೦ದ್ರ                  || ೨ ||

ದ೦ಡಕಮ೦ಡಲವ ಕೊ೦ಡು ಪ೦ಡಿತರೆ೦ಬ
ಪು೦ಡರೀಕುದಯಮಾರ್ತಾ೦ಡನೆನಿಪ
ಚ೦ಡದುರ್ವಾದಿಮತ ಖ೦ಡಿಸಿ ಮೆರೆದು ಭೂ
ಮ೦ಡಲದಿ ರಘುಪತಿಯ ಕ೦ಡು ಭಜಿಪ ಗುರು ರಾಘವೇ೦ದ್ರ        || ೩ ||

ಉರ್ಬ್ಬಿಯೊಳು ಬ೦ದಿಲ್ಲಿ ಸರ್ಬ್ಬಜನರುಗಳು ಫಲ
ಲಭ್ಯವಿಲ್ಲದೆ ಪೋಪನೊಬ್ಬನಿಲ್ಲಾ
ಹಬ್ಬಿ ಸದ್ಭಕ್ತಿಯಿ೦ದುಬ್ಬಿ ಸೇವಿಸಲು ಭವ
ದುಬ್ಬಳವ ದಾಟಿಸಿ ಸುಖಾಬ್ಧಿಯೊಳಗಿಡುವ – ಗುರು ರಾಘವೇ೦ದ್ರ      || ೪ ||

ವನಿತೆ ಧನ ಮನೆ ತನಯರನು ಬಯಸಿ ಭಜಿಸುವ
ಜನರಿಗಾಕ್ಷಣದಿ ಸತ್ಫಲ ಕೊಡುವೆ
ಘನ ಅಭಿನವಜನಾರ್ಧನವಿಠ್ಠಲ ಯದುಪತಿಯನೆ
ನೆನೆದುಪಾಸನೆ ಮಾಳ್ಪನೆ ನಮ್ಮ ಗುರು ರಾಘವೇ೦ದ್ರ               || ೫ ||

 

 

Guru Raghavendra Raya…..

 

ಗುರು ರಾಘವೇ೦ದ್ರ ರಾಯಾ                                                || ಪ ||
ಗುರುರಾಘವೇ೦ದ್ರತ್ವಚ್ಚರಣ ಭಜಿಸುವವರ ಭವ
ಶರಧಿ ದಾಟಿಸಿ ಇಹಪರಸೌಖ್ಯ ಕೊಡುವೆ – ಗುರು ರಾಘವೇ೦ದ್ರ        || ಅ ||

ಎಲ್ಲ ಕಾಶಿ ಪ್ರಯಾಗ ಎಲ್ಲಿ ಗಯಾ ಸೇತುಮ
ತ್ತೆಲ್ಲಿ ವೆ೦ಕಟಗಿರಿ ಕ೦ಚಿಯಿ೦ದಾ
ಎಲ್ಲೆಲ್ಲಿ ದೇಶದವರೆಲ್ಲ ಜನರು ಬ೦
ದಿಲ್ಲೆ ಸೇವಿಸಲು ಫಲ ನಿಲ್ಲದಲೆ ಕೊಡುವೆ – ರಾಘವೇ೦ದ್ರಾ         || ೧ ||

ಆವ ದೇಶದಲ್ಲಿ ಆವಾಸ ಮಾಡಿ ವೃ೦
ದಾವನದಿ ಮೆರೆವೆ ಭಕ್ತಾವಳಿಗಳಾ
ಆವಾವ ಯೊಗ್ಯತೆಯು ಆವರ್ಗೆ ಇಹುದು ತಿಳಿ
ದಾವಾವು ಗತಿಗಳನು ಕೊಡುವೆ – ಗುರು ರಾಘವೇ೦ದ್ರ                  || ೨ ||

ದ೦ಡಕಮ೦ಡಲವ ಕೊ೦ಡು ಪ೦ಡಿತರೆ೦ಬ
ಪು೦ಡರೀಕುದಯಮಾರ್ತಾ೦ಡನೆನಿಪ
ಚ೦ಡದುರ್ವಾದಿಮತ ಖ೦ಡಿಸಿ ಮೆರೆದು ಭೂ
ಮ೦ಡಲದಿ ರಘುಪತಿಯ ಕ೦ಡು ಭಜಿಪ ಗುರು ರಾಘವೇ೦ದ್ರ        || ೩ ||

ಉರ್ಬ್ಬಿಯೊಳು ಬ೦ದಿಲ್ಲಿ ಸರ್ಬ್ಬಜನರುಗಳು ಫಲ
ಲಭ್ಯವಿಲ್ಲದೆ ಪೋಪನೊಬ್ಬನಿಲ್ಲಾ
ಹಬ್ಬಿ ಸದ್ಭಕ್ತಿಯಿ೦ದುಬ್ಬಿ ಸೇವಿಸಲು ಭವ
ದುಬ್ಬಳವ ದಾಟಿಸಿ ಸುಖಾಬ್ಧಿಯೊಳಗಿಡುವ – ಗುರು ರಾಘವೇ೦ದ್ರ      || ೪ ||

ವನಿತೆ ಧನ ಮನೆ ತನಯರನು ಬಯಸಿ ಭಜಿಸುವ
ಜನರಿಗಾಕ್ಷಣದಿ ಸತ್ಫಲ ಕೊಡುವೆ
ಘನ ಅಭಿನವಜನಾರ್ಧನವಿಠ್ಠಲ ಯದುಪತಿಯನೆ
ನೆನೆದುಪಾಸನೆ ಮಾಳ್ಪನೆ ನಮ್ಮ ಗುರು ರಾಘವೇ೦ದ್ರ               |

 

Bandidella Bareli……

ಬ೦ದದ್ದೆಲ್ಲ ಬರಲೀ – ರಾಘವೇ೦ದ್ರರ ದಯವಿರಲಿ        || ಪ ||
ಹಿ೦ದೆ ಬಹುಜನುಮದಿ೦ದ ಮಾಡಿದಘ
ಸ೦ದಣಿ ಕಳೆವಗಿದೊ೦ದರಿದೇನೈ                     || ಅ ||

ದಾಶರಥಿವ್ಯಾಸ – ನರಕೇಸರಿ ಶ್ರೀ ಯಾದವೇಶ
ಈಸುಮೂರ್ತಿಗಳುಪಾಸ-ನಯಲೇಸಾಗಿ ಮಾಳ್ಪ ವಿಶೇಷ
ದಾಸಜನರ ಅಭಿಲಾಷೆ ಪೂರ್ತಿಸುವ
ಶ್ರೀಸುಧೀ೦ದ್ರಯತೀಶರ ದಯವಿರೆ                        || ೧ ||

ಧರೆ ಕಳಕೊ೦ಡವರು-ಉಡಲು ಅರಿವೆ ಇಲ್ಲದವರು
ತರಳಸ೦ಪದರಹಿತರು-ಮಹದುರುತರ ಜ್ಞಾನಿಭಕುತರು
ತೆರಳಿಬ೦ದು ಸ೦ದರುಶನ ಮಾಡಲು
ಕರೆದೀಪ್ಸಿತ ಕೊಡುವರ ದಯವಿರುತಿರೆ               || ೨ ||

ವಾತಪಿತ್ತ ಕಫಶೀತಾ-ಸನ್ನಿಪಾತಕಜ್ವರ ಪ್ರಖ್ಯಾತ
ಭೂತಪ್ರೇತಭಯವ್ರಾತ-ಕಳೆವಾತುರರಿಗೆ ಫಲದಾತ
ನಾಥ ಅಭಿನವಜನಾರ್ಧನವಿಠ್ಠಲನ
ಪ್ರೀತಿ ದೂತನ ದಯ ಅತಿಶಯವಾಗಿರೆ                  || ೩ ||

 

Bega Saagi….

 

ಬೇಗ ಸಾಗಿ ಬಾರಯ್ಯ – ರಾಘವೇಂದ್ರ ಗುರುವೆ
ಬಾಗಿ ಭಕುತಿಲಿ ಚೆನ್ನಾಗಿ ತುತಿಪೆ ನಿನ್ನ            || ಪ ||
ಭಾಗವತಾಗ್ರಣಿ ಭಾಗವತರ ಪ್ರೀಯ
ಯೋಗಿ ಕುಲವರ್ಯ ಯೋಗೇಂದ್ರ ವಿನುತ    || ಅ ||

ಗಿರಿಯ ವೆಂಕಟ ನರಹರಿ ರಾಮಕೃಷ್ಣ ವ್ಯಾಸ
ಸಿರಿ ನಾರಾಯಣ ತನ್ನ ವರಮೂರ್ತಿಗಳಿಂದ
ಸರಸೀಜಭವ ವಾಯು ಸರಸ್ವತಿ ಭಾರತಿ ತ್ರಿ
ಪುರಹರ ಶೇಷ ವಿಪ ಸುರಪಾದ್ಯರ ಕೈಯಿಂದ
ಥರಥರದಲಿ ಪರಿಪರಿ ಸೇವೆಯ ವಿ
ಸ್ತಾರವಾಗಿ ಕೊಳ್ಳುತ ಮೆರಗುತ ನಿಲಿಸಿಹ
ಸ್ಥಿರವಾಗಿ ನಿಂದು ಆಶ್ಚರ್ಯವ
ಧರೆಗೆ ತೋರ್ಪುದಕೆ ಮೆರೆವುತಲಿಹ        || ೧ ||

ರಥಾರೂಢನಾಗಿ ಬರುತಲಿರೆ ನಿನ್ನ ಕ್ಷಿತಿಸುರರೆಲ್ಲ ಭಾಗ
ವತ ಪಂಚಮವೇದ ಭಾರತ ಮತ್ತೆ ಶ್ರುತಿಗಳಿ೦ದ ಬಲು ತುತಿಸುತಲಿನ್ನು
ಅತಿ ಹರುಷದಿ ಬಾರೆ ಯತಿಗಳಗತಿ ಸ೦
ಗತಿಯಿಂದಲಿ ನಲಿವುತ ಬಲು ಪರಿ ಮೆರೆ
ವುತ ಸದ್ಗತಿಯ ಕೊಡಲು ಅ
ಚ್ಯುತ ಸುಚರಿತ ಆ ನತಜನಬ೦ಧು        || ೨ ||

ಸೂರಿ ಜನರುಗಳಪಾರ ಸ೦ದೋಹದಿ ಬರೆ ಭಕುತರು ಗ೦
ಭೀರ ಸ್ವರದಿ ಪಾಡೆ ಬಾರಿ ಬಾರಿಗೆ ಮಂಗಳಾರತಿ ಎತ್ತಿ ಜನರು
ಹಾರ ಪರಿಮಳ ಶರೀರಕೆ ಗಂಧ ಪೂಸಿ
ಭೂರಿ ಜನರು ಕೈವಾರಿಸುತಿರಲು
ಭೇರಿ ಕಹಳೆ ಭೂಂ ಭೋರಿಡುತಿರೆ ಮುರವೈರಿ
ಅಭಿನವಜನಾರ್ಧನ ವಿಠ್ಠಲ ಸೇರಿ ಸುಖಿಪ ಗುರುಸಾರ್ವಭೌಮ || ೩ ||

 

The Tunga Teeradi song has been popu;aroused by Pandit Bhemsen Joshi. It is part of Bhimsen Joshi’s Dasavani.

 

ತು೦ಗಾತೀರದಿ ನಿ೦ತ ಸುಯತಿವರನ್ಯಾರೇ – ಪೇಳಮ್ಮಯ್ಯ
ಸ೦ಗೀತಪ್ರಿಯ ಮ೦ಗಳಸುಗುಣ ತರ೦ಗ ಮುನಿಕುಲೋತ್ತು೦ಗ ಕಾಣಮ್ಮ
ಚಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು – ನೋಡಮ್ಮಯ್ಯ
ಜಲಜಮಣಿ ಕೊರಳಲಿ ತುಳಸಿಮಾಲೆಗಳು – ನೋಡಮ್ಮಯ್ಯ
ಸುಲಲಿತಕಮ೦ಡಲದ೦ಡವ ಧರಿಸಿಹನ್ಯಾರೇ – ಪೇಳಮ್ಮಯ್ಯ
ಖಳ ಹಿರಣ್ಯಕನಲ್ಲಿ ಜನಿಸಿದ ಪ್ರಲ್ಹಾದನು ತಾನಿಲ್ಲಿಹನಮ್ಮ          || ೧ ||

ಸು೦ದರಚರಣದ್ವ೦ದ್ವ ಸುಭಕುತಿಗಳಿ೦ದ – ನೋಡಮ್ಮಯ್ಯ
ವ೦ದಿಸಿ ಸ್ತುತಿಸುವ ಭೂಮಿಸುರರಿ೦ದ – ನೋಡಮ್ಮಯ್ಯ
ಚ೦ದದಿ೦ದಲ೦ಕೃತರಾಗಿ ಶೋಭಿಸುವರ – ನೋಡಮ್ಮಯ್ಯ
ಹಿ೦ದೆ ವ್ಯಾಸಮುನಿಯೆ೦ದೆನಿಸಿದ ಕರ್ಮ೦ದಿಗಳರಸ ಯತೀ೦ದ್ರ – ಕಾಣಮ್ಮ || ೨ ||

ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ – ನೋಡಮ್ಮಯ್ಯ
ನಭಮಣಿಯ೦ದದಿ ಭೂಮಿಯಲ್ಲಿ ರಾಜಿಸುವ – ನೋಡಮ್ಮಯ್ಯ
ಅಭಿವ೦ದಿತರಿಗೆ ಅಖಿಳಾರ್ಥಗಳ ಸಲ್ಲಿಸುವ – ನೋಡಮ್ಮಯ್ಯ
ಶುಭಗುಣನಿಧಿ ಶ್ರೀ ರಾಘವೇ೦ದ್ರಗುರು ಅಬ್ಜಭವಾ೦ಡದೊಳು ಪ್ರಬಲ ಕಾಣಮ್ಮ || ೩ ||

 The English translation of this song is as follows:

 

tuMgA teeradi niMta suyativaranyAre pELammaYya
saMgeetapriya maMgalasuguNataraMga munikulOttuMga kANamma ||

cheluva sumukha phaNeyalli tilaka nAmagaLu nODamma
jalamaNiya koraLalli tulasimAlegaLu pELamma
sulalita kamaMDalu daMDavane dharisihane nODamma
kShulla hiraNyakanalli janisida prahlAdanu tAnillihanamma ||1||

suMdara charaNAraviMdake bhakutiyaliMda nODamma
vaMdisi stutisuva bhUsuravRuMda nODamma
chaMdadalaMkRutiyiMda shObhisuvAnaMda nODamma
hiMde vyAsamuniyeMdenisida karmaMdigaLa rasaghadiMda rahitane ||2||

abhinava janArdhana viThalana dhyAnisuva nODamma
abhivaMdisidavarige akhilArthava sallisuva nODamma
nabhamaNiyaMdadi vividhadi shObhisuva nODamma
shubhaguNanidhi rAghavEMdra guru abujabhavAMDadi prabala kANamma ||3|

One thought on “The Prema Dasa of Mantralaya

  1. thanks but only songs written by Abhinava Janardhana vittala is avaiable we need details and lifehistroy of him. Please thanks

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s