Archive | December 14, 2013

Rhymes of beauty

ರಾಯರ ನೋಡಿರೈ – ಶುಭತಮ ಕಾಯರ ಪಾಡಿರೈ            || ಪ ||

ತೋಯಜಪತಿ ನಾರಾಯಣ ಪದಯುಗ

ಭೃಂಗ – ಭಕ್ತ ಕೃಪಾಂಗ            || ಅ ||

ಸುಂದರ ಮುಖ ಅರವಿಂದ ಲೋಚನ – ಘ್ರಾಣ

ಕುಂದಕುಟ್ಮಲಸಮರದನ – ರಾಜಿತವದನ

ಮಂದಸ್ಮಿತಯುತ ದ್ವಂದ್ವ ಓಷ್ಟ ಶ್ರುತಿ

ಛಂದವಾಗಿಹ ಚುಬುಕಾ – ಫಾಲಾದಿ ತಿಲಕಾ

ಕಂಧರಯುತ ಪುರಂದರ ಕರಿಕರ

ವೃಂದವಾಗಿಹ ಬಾಹುಯುಗಳಾ – ಮೂಲಾಂಕಿತ ಕೊರಳ

ಇಂದಿರಾಪತಿ ನಿಜಮಂದಿರವೆನಿಸುವ

ಸುಂದರ ಹೃದಯದಿ ನಾಮಾ – ಹಚ್ಚಿದ ಪ್ರೇಮಾ            || ೧ ||

ಹಸ್ತದಿ ರಾಜಿಪ ಪುಸ್ತಕ ಮಣಿಮಾಲೆ

ಸ್ವಸ್ಥಿಕಾಸನಸ್ಥಿತಮೋದ – ಕೃತ ವಿನೋದ

ಮಸ್ತಕದಿಂದಲಿ ವಿಸ್ತ್ರಿತ ಕಾಷಾಯ

ವಸ್ತ್ರದಿ ಶೋಭಿಪ ಗಾತ್ರ – ಶುಭ ಚಾರಿತ್ರ

ಸ್ವಸ್ಥ ಮನದಿ ಪ್ರಾಶಸ್ಥ ಹರಿಯ ಪಾದ

ಸ್ವಸ್ತಿಕ ಯುಗಳ ಧ್ಯಾನ – ಮಾಡುವ ಜ್ಞಾನ

ಧ್ವಸ್ತ ದೋಷ ಸಮಸ್ತ ಜಗತ್ತಿಗೆ

ಸ್ವಸ್ಥಿದ ನೆನೆನಿದ ಭೂಪಾ – ಭವ್ಯ ಪ್ರತಾಪ        || ೨ ||

ಕುಟಿಲ ವಿಮಲತರ ಪಟಲಾಂಧಕಾರಕೆ

ಪಟುತರ ದಿನಮಣಿ ರೂಪ – ನಿಜಜನ ಸುರಪ

ಸ್ಫುಟ ಮೋದತೀರ್ಥರ ಸ್ಫಟಿಕ ಜಲಧಿಯೊಳು

ಸ್ಫುಟಿತಹಾಟಕಚಂದ್ರ – ಸದ್ಗುಣಸಾಂದ್ರ

ಶಠಮಾಳ್ಪರ ಬಹು ಹಟದಿ ಶಿಕ್ಷಿಸುವ

ಚಟುಲ ಜನರ ಪರಿಪಾಲ – ಕರುಣ ವಿಶಾಲಕಿಟಿರದನ ಭವನದಿತಟಕೃತಮಂದಿರ ದಿಟ ಗುರುಜಗನ್ನಾಥವಿಠ್ಠಲ ದೂತ            || ೩ ||

Rayaru Noodiro is one among the many beautiful compositions of  Jagannatha Dasa.
Jagannatha Dasa has composed several compositions on Rayaru or Raghavendra Swamy.Here, we see that the Ankita at the end of the song is Jagannatha Vittala Dasa. This is the name under which Jagannatha Dasa of Manvi wrote. He also wrote the SriHarikathamrutusara. Jagannatha Dasa of Manvi wrote under the ankita Jagannatha Vittala. The Eddu Baruthara….. is another beautiful song by Jagannatha Vittala.The lyrics are as follows:

&ದ್ದು ಬರುತಾರೆ ನೋಡೆ – ಗುರುಗಳು ತಾ

ವೆದ್ದು ಬರುತಾರೆ ನೋಡೆ            || ಪ ||
ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ    || ಅ ||

ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು
ಚೆಲುವ ಮುಖದೊಳು ಪೊಳೆವೊ ದಂತಗಳಿಂದ        || ೧ ||

ಹೃದಯಮಂದಿರದಲ್ಲಿ ಪದುಮನಾಭನ ಭಜಿಸಿ
ಮುದಮನದಲಿ ನಿತ್ಯ ಸದಮಲ ರೂಪತಾಳಿ    || ೨ ||

ದಾತ ಗುರುಜಗನ್ನಾಥವಿಠ್ಠಲನ್ನ
ಪ್ರೀತಿಯ ಪಡಿಸುತ ದೂತರ ಪೊರೆಯುತ        || ೩ ||

The English lyrics are as follows:

Yeddu baruthare Node,

thaeddu baruthare Node ||pa||

Muddu Brindavanada Madyadolaginda
Thiddi hachida nama Mudregaloputhive

Galadolu Shri Tulasi Nalinakshi Malegalu
Cheluva Mukhadolu Poleva Danthagalinda ||1||

Hridaya Sadanadalli Padubhanamana Bhajisi
Mudamanadinda Nitya SadaMalaRoopa Thali ||2||

Datha Guru Jagannatha Vittalana
Prithiya Padisutha Doothara Poreyutha ||3||

Another song is Swami Laali. The English lyrics are as follows:

swAmi laAli bhakta prEma laAli

kAma enipa gurusArvabhouma laAli

indra laAli rAghavEMdra laAli

sandra bhakta kumuda pUrNachandra laAli

dharaNi laAli nija karuNiye laAli

sharaNa janara kAyuva pUrNa laAli

dEva laAli nija bhava laAli

bhavisuvara nitya nee kAva laAli

rAja laAli kalpabhuja laAli

rAjisuva yatikulada tEja laAli

dAsa laAli nija dAsa laAli

preeti Guru JagannAtha viThThala dUta laAli.

One of the most popular arati songs on Raghavendra is also by Jagannatha Dasa. The Kannada and English lyrics are as follows:

ಮ೦ಗಳ ಗುರುರಾಘವೇ೦ದ್ರಗೆ
ಜಯ ಮ೦ಗಳ ಸುಜನಾ೦ಬುಧಿಚ೦ದ್ರಗೆ

ಶ್ರೀ ಸುಧೀ೦ದ್ರಕುಮಾರಗೆ ಮ೦ಗಳ
ಭೂಸುರಾನ್ವಿತನಿಲಯಗೆ ಮ೦ಗಳ
ದೈಶಿಕ ಕುಲವನಜಾಕ೯ಗೆ ಮ೦ಗಳ
ಭಾಸುರ ಕೀರ್ತಿಯ ಪಡೆದವಗೆ

ವೄ೦ದಾವನದೊಳಗೆ ಸುರದ್ರುಮ
ಆನ೦ದದಿ ರಾಜಿಸುವಗೆ ಮ೦ಗಳ
ಅ೦ಧ ಪ೦ಗು ಮೂಕ ಬಧಿರರೀಪ್ಸಿತ
ಸ೦ದೋಹ ಸಲಿಸುವ ಗುರುವಯ೯ಗೆ

ಭೂತ ಪ್ರೇತಾಳ ವಿಪಿನಭಯ
ವೀತಿಹೋತ್ರಗೆ ಶುಭಮ೦ಗಳ
ದಾತಜನಕ ಜಗನ್ನಾಥವಿಟ್ಠಲನ
ದೂತರ ಸಲಹುವ ದಾತನಿಗೆ

The English lyrics are:

Mangala Gururaghavendrage
Jaya Mangala Sujanambudhicandrage

Sri Sudindrakumarage Mangala
Bhusuranvithanilayage Mangala
Daisika Kulavanajakage Mangala
Bhasura Kiritiya Padedavage

Varundavanadolage Suradruma
Anandadi Rajisuvage Mangala
Andha Panogy mukha Badhiraripsita
Sandoha Salisuva Guruvaryage

Bhuta Pretala Vipinabhaya
Vitihotrage Shubamangala
Datajanaka Jagannatha Vittalana
Dootara Salahuva Datanige.

Roga Harane Priya is yet another song that is highly popular. The Engish lyrics are as follows:

Roga Harane Krupa Saagara Sri Guru
Raghavendra PariPaliso ||

Santhata Durmatha Dwanda Diwakara
Santhavinutha Matha Laaliso ||1||

Pavana Gathrasu Deva varane Thava
Sevaka Janarolagadeeso ||2||

Ghanna Mahima Jagannatha Vittala Priya
Ninna Aradhane Maadiso ||3||

The Kannada lyrics are as follows:

ರೋಗಹರನೆ ಕೃಪಾಸಾಗರ ಶ್ರೀಗುರು
ರಾಘವೇ೦ದ್ರ ಪರಿಪಾಲಿಸೋ                 || ಪ ||

ಸ೦ತತ ದುರ್ವಾದಿಧ್ವಾ೦ತ ದಿವಾಕರ
ಸ೦ತವಿನುತ ಮಾತ ಲಾಲಿಸೊ          || ೧ ||

ಪಾವನಗಾತ್ರ ಭೂದೇವವರನೆ ತವ
ಸೇವಕಜನರೊಳಗಾಡಿಸೋ                  || ೨ ||

ಘನ್ನಮಹಿಮ ಜಗನ್ನಾಥವಿಠ್ಠಲಪ್ರಿಯ
ನಿನ್ನಾರಾಧನೆ ಮಾಡಿಸೋ               || ೩ ||

This song is unique.  It is called ಸುರಪನಾಲಯದಂತೆ ಮಂತ್ರಾಲಯ

ಸುರಪನಾಲಯದ೦ತೆ ಮ೦ತ್ರಾಲಯ                   || ಪ ||
ಕರೆಸುವುದು ಕ೦ಗೊಳಿಸುವುದು ನೋಳ್ಪ ಜನಕೆ        || ಅ ||

ಸುರತರುವಿನ೦ತಿಪ್ಪ ಕೀರ್ತಿಸಚ್ಛಾಯಾ ಶ್ರೀ
ತರಮನೋರಥವ ಪೂರೈಸುವ
ಧರಣೀಸುರಾಖ್ಯಷಟ್ಬದಗಳಿಗೆ ದಿವ್ಯಸುಧಾ
ಪರಿಮಳವು ತೃಪ್ತಿಪಡಿಸಿದ ಮರುತನ೦ತೆ          || ೧ ||

ಕಾಮಧೇನುವಿನ೦ತೆ ಇಪ್ಪ ಗುರುಸಾರ್ವ
ಭೌಮ ಸುಧೀ೦ದ್ರಸುತ ರಾಘವೇ೦ದ್ರ
ಆ ಮಾಯಾವಾದಿ ತಾಮಿಶ್ರ ಓಡಿಸುವ ಚಿ೦
ತಾಮಣಿಯ೦ತೆ ಹೊಳೆವ ವೃ೦ದಾವನ                 || ೨ ||

ವಾರಾಹಿ ಎ೦ಬ ನ೦ದನವನದಿ ವಿ
ಹಾರಮಾಳ್ಪರು ನತಜನಸ್ನಾನಪಾನ
ಶ್ರೀ ರಾಘವೇ೦ದ್ರರು ಇಲ್ಲಿಪ್ಪ ಕಾರಣಾ
ಪಾರಕಾರುಣ್ಯನಿಧಿ ಜಗನ್ನಾಥವಿಠ್ಠಲನಿಹನು      || ೩ ||

Nambi Kettava…….is  another song by this Haridasa. The lyrics in Kannada and English are as follows:

ನಂಬಿ ಕೆಟ್ಟವರಿಲ್ಲವೊ ರಾಯರ ಪಾದ ನಂಬಿ ಕೆಟ್ಟವರಿಲ್ಲವೊ
ನಂಬಿದ ಜನರಿಗೆ ಬೆಂಬಲ ತಾನಾಗಿ
ಹಂಬಲಿಸಿದ ಫಲ ತುಂಬಿ ಕೊಡುವರ ||

ಜಲಧರ ದ್ವಿಜವರಗೆ ತಾನೇ ಒಲಿದು ಸುಲಭದಿ ಮುಕುತಿಯನಿತ್ತ
ಚೆಲುವ ಸುತನ ಪಡೆದ ಲಲನೆಗೆ ಸ್ವರದಿಂದ
ಪುಲಿನಗರ್ಪದಿ ದಿವ್ಯ ಜಲವನಿತ್ತವರ ||೧||

ಮೃತ್ಯುದೂತರು ತನ್ನ ಪೊಂದಿದ ನಿಜ ಭಕ್ತರ ಕರೆದೊಯ್ಯಲು
ಸತ್ತ ದ್ವಿಜನ ತಾನು ಮತ್ತೆ ಧರೆಗೆ ತಂದು
ಮೃತ್ಯು ಬಿಡಿಸಿ ಸುಖವಿತ್ತು ಪೊರೆದಿಹರ ||೨||

ದಿಟಗುರು ಜಗನ್ನಾಥ ವಿಠಲನ ಒಲುಮೆ ಘಟನವಾದುದರಿಂದ
ಘಟನಾ ಘಟನಕಾರ್ಯ ಘಟನ ಮಾಡುವ ನಮ್ಮ
ಪಟು ಗುರುವರ ಹೃತ್ಪುಟದಿ ಇರುವರ ||೩||

naMbi keTTavarillavo rAyara pAda naMbi keTTavarillavo
naMbida janarige beMbala tAnAgi
haMbalisida phala tuMbi koDuvara ||

jaladhara dvijavarage tAnE olidu sulabhadi mukutiyanitta
cheluva sutana paDeda lalanege svaradiMda
pulinagarpadi divya jalavanittavara ||1||

mRutyudUtaru tanna poMdida nija bhaktara karedoyyalu
satta dvijana tAnu matte dharege taMdu
mRutyu biDisi sukhavittu poredihara ||2||

diTaguru jagannAtha viThalana olume ghaTanavAdudariMda
ghaTanA ghaTanakArya ghaTana mADuva namma
paTu guruvara hRutpuTadi iruvara ||3||

Another song almost on similar lines is Ninna Nambide. The Kannada lyrics are as follows:

ನಿನ್ನ ನ೦ಬಿದೆ ರಾಘವೇ೦ದ್ರ – ನೀ – ಎನ್ನ ಪಾಲಿಸು ಸುಯಮೀ೦ದ್ರ             || ಪ ||
ಸನ್ನುತ ಸರಸ ಕವೀ೦ದ್ರ – ಪ್ರಸನ್ನ ಹೃತ್ಕುಮುದ ಸುಚ೦ದ್ರ                      || ಅ ||

ಭಾರತೀಶಪದಾಬ್ಜಭ್ಯ೦ಗ – ಖರಾರಿಯ ಕರುಣ ತರ೦ಗ
ಸಾರಿದವರ ಭವಭ೦ಗ – ಸಮೀರಮತಾಬ್ಜ ಪತ೦ಗ                                    || ೧ ||

ಭೇದಮತಾಬ್ಧಿ ವಿಹಾರ – ಕುವಾದಿ ಮದವನ ಕುಠಾರ
ಸಾಧಿತಾಖಿಲ ತತ್ತ್ವಸಾರ – ಮಧುಸೂದನ ಚ೦ದ್ರಚಕೋರ                            || ೨ ||

ಸುಧೀ೦ದ್ರ ಕರಕ೦ಜಜಾತ – ವಿಬುಧ ಸ೦ಘ ಸತತ ಸಮೇತ
ವಿಧಿಪಿತಗುರು ಜಗನ್ನಾಥ ವಿಠ್ಠಲ – ನಧಿಕನೆ೦ದೊರೆದ ವಿಖ್ಯಾತ                       || ೩ ||

The Baro Raghavendra Baro is another song which is popular. The Kannada lyrics is as follows:

ಬಾರೋ ರಾಘವೇ೦ದ್ರ – ಬಾರೋ
ಕಾರುಣ್ಯವಾರಿಧಿಯೆ ಬಾರೋ
ಆರಾಧಿಪ ಭಕ್ತರಭೀಷ್ಟವ
ಪೂರೈಸುವ ಪ್ರಭುವೆ ಬಾರೋ        || ಪ ||

ರಾಜವ೦ಶೋದ್ಭವನ ಪಾದ
ರಾಜೀವಭೃ೦ಗನೆ ಬಾರೋ
ರಾಜಾಧಿರಾಜರೊಳು ವಿ
ರಾಜಿಸುವ ಚೆಲುವ ಬಾರೋ    || ೧ ||

ವ್ಯಾಸರಾಯನೆನಿಸಿ ನೃಪನಾ
ಕ್ಲೇಶ ಕಳೆದವನೆ ಬಾರೋ
ಶ್ರೀಸುಧೀ೦ದ್ರರ ಕರಸ೦ಜಾತ
ವಾಸುದೇವಾರ್ಚಕನೆ ಬಾರೋ        || ೨ ||

ಸನ್ಯಾಸ ಕುಲದೀಪ ಬಾರೋ
ಸನ್ನುತ ಮಹಿಮನೆ ಬಾರೋ
ಮಾನ್ಯ ಜಗನ್ನಾಥವಿಠ್ಠಲಾ
ಪನ್ನಜನರ ಪ್ರಿಯನೆ ಬಾರೋ    || ೩ ||

Another similar song is Raya Baro, Thande Thayi Baro.

The lyrics of the song in Kannada are as follows:

ರಾಯ ಬಾರೋ – ತ೦ದೆ ತಾಯಿ ಬಾರೋ ನಮ್ಮ ಕಾಯಿ ಬಾರೋ
ಮಾಯಿಗಳ ಮರ್ಧಿಸಿದ ರಾಘವೇ೦ದ್ರ ರಾಯ ಬಾರೋ || ಪ ||

ವ೦ದಿಪ ಜನರಿಗೆ ಮ೦ದಾರ ತರುವ೦ತೆ
ಕು೦ದದಭೀಷ್ಟವ ಸಲಿಸುತಿಪ್ಪ – ರಾಯ ಬಾರೋ
ಕು೦ದದಬೀಷ್ಟವ ಸಲಿಸುತಿಪ್ಪ ಸರ್ವಜ್ಞ
ಮ೦ದನ್ನ ಮತಿಗೆ ರಾಘವೇ೦ದ್ರ – ರಾಯ ಬಾರೋ || ೧ ||

ಆರುಮೂರು ಎಳು ನಾಲ್ಕು ಎ೦ಟು ಗ್ರ೦ಥ ಸಾರಾರ್ಥ
ತೋರಿದಿ ಸರ್ವರಿಗೆ ನ್ಯಾಯದಿ೦ದ – ರಾಯ ಬಾರೋ
ತೋರಿದಿ ಸರ್ವರಿಗೆ ನ್ಯಾಯದಿ೦ದ ಸರ್ವಜ್ಞ
ಸೂರಿಗಳರಸನೆ ರಾಘವೇ೦ದ್ರ – ರಾಯ ಬಾರೋ || ೨ ||

ರಾಮಪದಸರಸೀರುಹ ಭೃ೦ಗ ಕೃಪಾಪಾ೦ಗ
ಭ್ರಾಮಕ ಜನರ ಮತಭ೦ಗ – ರಾಯ ಬಾರೋ
ಭ್ರಾಮಕ ಜನರ ಮತಭ೦ಗ ಮಾಡಿದ
ದೀಮ೦ತರೊಡೆಯನೆ ರಾಘವೇ೦ದ್ರ – ರಾಯ ಬಾರೋ || ೩ ||

ಭಾಸುರಚರಿತನೆ ಭೂಸುರವ೦ದ್ಯನೆ
ಶ್ರೀ ಸುಧೀ೦ದ್ರಾರ್ಯರ ವರಪುತ್ರ – ರಾಯ ಬಾರೋ
ಶ್ರೀ ಸುಧೀ೦ದ್ರಾರ್ಯರ ವರಪುತ್ರನೆನಿಸಿದ
ದೈಶಿಕರೊಡೆಯನೆ ರಾಘವೇ೦ದ್ರ – ರಾಯ ಬಾರೋ || ೪ ||

ಭೂತಳನಾಥನ ಭೀತಿಯ ಬಿಡಿಸಿದ
ಪ್ರೇತತ್ವ ಕಳೆದಿ ಮಹಿಷಿಯ – ರಾಯ ಬಾರೋ
ಪ್ರೇತತ್ವ ಕಳೆದಿ ಮಹಿಷಿಯ ಮಹಮಹಿಮ
ಜಗನ್ನಾಥ ವಿಠ್ಠಲನ ಪ್ರೀತಿಪಾತ್ರ – ರಾಯ ಬಾರೋ || ೫ ||

The incomparable Tuugire Rayara is a gem and it is sung every day when the Raghavendra Swamy matha closes for the night.

The lyrics in English are:

tUgire rAyara tUgire gurugaLa
tUgire yathikula thilakara
tUgire yogeendra karakamala poojayara
tUgire guru Raghavendrara ||

ku0dana mayavada chaMdada tOTiladolu
naMdadi malagyara tUgire
naMdanakaMda govinda mukundana
nandadi Bhajipara tUgire ||1||

yauganidreyanu bEgane mADuva
Yoghisha Vandyara tUgire
Bhogishayanana pada yogadi Bhajipara
Bhagavatharana tUgire ||2||

nEmadi tananu kamipajanarige
kamita koDuvavara tUgire
premadi nijajanara aamayavanukoola
dhoomaketuvenipara tUgire ||3||

Advaitha mathada vidvashana nijaguru
madhwamathodharana tUgire
siddha sankalpadi baddha nijabhaktara
uddharamalpara tUgire ||4||

Bhajaka janaru bhava trujana maDisi avara
nijjagathiippara tUgire
nijaguru JagannathaVittalana padakanja
Bhajaneya malpara tUgire ||5||

This is another little known song from Jagannatha Dasa.

ಕರುಣಿಗಳೊಳಗೆಣೆ ಕಾಣೆನೊ ನಿನಗೆ ಸ
ದ್ಗುರುವರ ರಾಘವೇ೦ದ್ರ            || ಪ ||
ಚರಣ ಕಮಲಯುಗ್ಮ ಮೊರೆಹೊಕ್ಕವರ ಮನದ
ಹರಕೆಯ ನಿರುತದಲೀವೆ-ನೀ ಕಾವೇ        || ಅ ||

ರಾಘವೇ೦ದ್ರ ಗುರುವೇ ಗತಿ ಎ೦ದನು
ರಾಗದಿ೦ದಲಿ ಭಜಿಪ
ಭಾಗವತರ ದುರಿತೌಘಗಳಳಿದು ಚೆ
ನ್ನಾಗಿ ಸ೦ತೈಸುವೆ ನೀ-ಸನ್ಮೌನಿ            || ೧ ||

ಸುಧೀ೦ದ್ರಯತಿಕರ ಪದುಮಸ೦ಭವ ಮಧು
ವಧ ಪಾದಾ೦ಬುಜ ಮಧುಪ
ತ್ರಿದಶಭೂರುಹದ೦ತೆ ಬುಧರೀಪ್ಸಿತ
ಒದಗಿ ಪಾಲಿಸಿ ಪೊರೆವೆ-ಮದ್ಗುರುವೆ        || ೨ ||

ಕುಧರದೇವನ ದಿವ್ಯರದನದಿ ಜನಿಸಿದ
ನದಿಯ ತೀರದಿ ಶೋಭಿಪ
ಸದಮಲ ಘನ ಮ೦ತ್ರಸದನನಿಲಯ ಜಿತ
ಮದನ ಶ್ರೀ ಜಗನ್ನಾಥವಿಠ್ಠಲನ ದೂತ            || ೩ ||

Sri Raghavendra Nimma is another song by this Haridasa.

The lyrics in Kannada is as follows:

ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ
ಸಾರಿದೆ ಶರಣ ಮ೦ದಾರ ಕರುಣವ                || ಪ ||
ಘೋರ ಭವ ವನಧಿ ತಾರಿಸು ಕರುಣದಿ
ಸೂರಿ ಸುಧೀ೦ದ್ರ ಕುಮಾರ ಉದಾರ                || ಅ ||

ಮುನಿರಾಯ ನಿಮ್ಮ ಪಾದವನರುಹ ಧ್ಯಾನ
ಪ್ರಣವ ಸುಸ್ತವನ ಅರ್ಚನೆ ಮಾಳ್ಪ ನಾನಾ
ಜನರ ವಾ೦ಛಿತವೀವ ಗುಣಗಣಪೂರ್ಣ ಜ್ಞಾನ
ಧನವ ಪಾಲಿಸೆನಗೀಕ್ಷಣ ನಿನ್ನಾಧೀನ
ಮನುಜನ ಪ್ರತಿದಿನ ದಣಿದಣಿಸುವುದು
ಘನವೇ ಗುರುಪಾವನತರಚರಿತ        || ೧ ||

ಮೂಲರಾಮನಪಾದ ಕೀಲಾಲಜ ಮಧುಪ
ಬಾಲನ ಬಿನ್ನಪ ಲಾಲಿಸೋ ಮುನಿಪ
ತಾಳಲಾರೆನೊ ತಾಪತ್ರಯದ ಸ೦ತಾಪ
ಕೇಳೊ ವಿಮಲಜ್ಞಾನ ಶೀಲ ಸ್ವರೂಪ
ಭೂಲಲನಾಪತಿ ಕೋಲನ೦ದಿನಿ
ಕೂಲಗ ವರಮ೦ತ್ರಾಲಯನಿಲಯ            || ೨ ||

ಕಲಿಕಲ್ಮಷದೂರ ಕುಜನಕುಠಾರ
ನಳಿನಾಕ್ಷ ವಿಮಲ ಶ್ರೀತುಲಸಿಯ ಹಾರ
ಗಳಶೋಭಿತ ಕಮ೦ಡಲ ದ೦ಡಧರ
ಅಲವಬೊಧರಮತಜಲಧಿ ವಿಹಾರ
ಸುಲಲಿತ ಕರುಣಾಬ್ಧಿ ಜಗನ್ನಾಥವಿಠ್ಠಲನ
ಒಲುಮೆಯ ಪಡೆದೀ ಇಳೆಯೊಳು ಮೆರೆದೆ        || ೩ ||

Namisi Beduve Varaganallu is where Jagannatha Dasa says he will plead with Rayaru for granting him wishes.

The English lyrics is as follows:

ನಮಿಸಿ ಬೇಡುವೆ ವರಗಳ ನಿನ್ನ
ಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ        || ಪ ||

ವಿಮಲ ಸುಮತಿ ಜನರತಿಪ್ರೀಯಾ – ಪಾದ
ಕಮಲಗಳಿಗೆರಗುವೆನೊ ಜೀಯಾ
ಶಮಲ ಮಾರ್ಗದಲಿ ನೀ ನೀಯದಿರೊ ಮತಿಯ
ಅಮಿತ ಕರುಣದಿ ಪಿಡಿಯೋ ಕೈಯ್ಯ        || ೧ ||

ಕ೦ಡಕ೦ಡವರನು ಬೇಡಿ ನೊ೦ದೆ ಕ
ಮ೦ಡಲು ದ೦ಡಧಾರಿ ನೀ ಗತಿಯೆ೦ದೆ
ಪ೦ಡಿತಾಗ್ರಗಣ್ಯ ಇನ್ಯಾರು ಮು೦ದೆ ಕೋ
ದ೦ಡಪಾಣಿಯ ಪಾದ ತೋರಿಸು ತ೦ದೆ        || ೨ ||

ಶ್ರೀ ಸುಧೀ೦ದ್ರ ಯತಿಕರಕ೦ಜಜಾತ ತು೦
ಗಾಸುನದಿನಿಲಯಾ ಅಘಾ೦ಬುಧಿ ಪೋತ
ವಾಸುಕಿಶಯನ ಜಗನ್ನಾಥ ವಿಠ್ಠಲ
ದಾಸರ ಪೋಷಕ ಲಾಲಿಸಿ ಪೋತಾ        || ೩ ||

The ಸ್ಮರಿಸಿ ಬೇಡುವೆ ನಾ – ಹೇ ಗುರುಸಾರ್ವಭೌಮ is a composition almost similar in thought and expression to Namisi Beduve. The Kannada lyrics are as follows:

ಸ್ಮರಿಸಿ ಬೇಡುವೆ ನಾ – ಹೇ ಗುರುಸಾರ್ವಭೌಮಾ        || ಪ ||
ನಿರುತ ನೀ ಪೊರೆಯನ್ನ – ವಾದಿಗಜಸಿ೦ಹ        || ಅ ||

ದಿತಿಸುತಗೆ ಸುತನೆನಿಸಿ ಅತಿಮುದದಿ ಸುರಮುನಿಯ
ಮತಪಿಡಿದು ಹರಿಮಹಿಮೆ ಪಿತಗೆ ಪೇಳಿ
ಖತಿಗೊ೦ಡು ನಿನ್ನ ಮೂರುತಿ ತೋರೆನಲು ಶ್ರೀ
ಪತಿಯ ಸ್ತ೦ಭದಿ ಕರೆದ ಪ್ರಲ್ಹಾದರಾಜ        || ೧ ||

ಬಾಲ್ಯದಲಿ ಯತಿಯಾಗಿ ಲೀಲೆಯಿ೦ದಲಿ ಭೂಮಿ
ಪಾಲಗೊದಗಿರ್ದ ಕುಯೋಗ ಬಿಡಿಸಿ
ಖೂಳ ಮಾಯ್ಗಳ ಜಯಿಸಿ ಚ೦ದ್ರಿಕಾ ಗ್ರ೦ಥವನು
ಪೇಳಿ ಹಿರಿಪೀಠವೇರಿದ ವ್ಯಾಸರಾಜ            || ೨ ||

ಕಾಮರಿಪುನುತ ಮೂಲರಾಮಪದಯುಗಕುಮುದ
ಸೋಮನೆನಿಸುವ ಭಕ್ತ ಸ್ತೋಮಕೆಲ್ಲ
ನೇಮದಿ೦ದಲಿ ವಿವಿಧ ಕಾಮಿತಾರ್ಥ ಸ್ಫುಟಿತ
ಹೇಮಸನ್ನಿಭಗಾತ್ರ ಪಾವನಚರಿತ್ರ        || ೩ ||

ಶಾ೦ತತೆಯ ಪೊ೦ದಿ  ಮ೦ತ್ರಾಲಯದಿ ವೃ೦ದಾವ
ನಾ೦ತರದೊಳಿರುತ ಸಿರಿಕಾ೦ತಹರಿಯ
ಚಿ೦ತಿಸುತಲಿಹ ಸರ್ವತ೦ತ್ರ ಸ್ವತ೦ತ್ರ ಕರು
ಣಾ೦ತರ೦ಗನೆ ರಾಘವೇ೦ದ್ರಯತಿವರ್ಯಾ        || ೪ ||

ಮೂಕಬಧಿರಾ೦ಧತ್ವಗಳ ಪೊ೦ದಿ ಧರಣಿಯೊಳು
ವ್ಯಾಕುಲವ ಪಡುವವರನುಧ್ಧರಿಸುತ
ನಾಕಪತಿವಿನುತ ಜಗನ್ನಾಥವಿಠ್ಠಲಮಧುವ
ನೀಕೊಟ್ಟು ಸಲಹೆನ್ನಭೀಷ್ಟಸಮುದಾಯ    || ೫ ||

Namo Namo Raghavendra is a small but beautiful composition. The Kannada lyrics are as follows:

ನಮೋ ನಮೋ ಶ್ರೀ ರಾಘವೇ೦ದ್ರ ಸದ್ಗುಣಸಾ೦ದ್ರ
ಕಮಲನಾಭನದಾಸ ಕಮಲಾಪ್ತ ಭಾಸ            || ಪ ||

ದೇಶದೇಶಗಳಿ೦ದ ದೈನ್ಯದಿ೦ದಲಿ ಬ೦ದ
ಅಶೇಷ ಜನರುಗಳನ್ನ ಸಲಹುವ ಸುಘನ್ನ
ನಾ ಸೇರಿದೆನೊ ನಿನ್ನ ನಮಿತಜನರ ಪ್ರಸನ್ನ
ಭಾಸುರಚರಿತ ಭಜಿಸುವೆನು ಅನವರತ    || ೧ ||

ಭೇದಾರ್ಥಜಲಜಾರ್ಕ ಭೂರಿಬಲತರತರ್ಕ
ವಾದಿ ವೃಕ್ಷಕೆ ಕುಲಿಶ ವರಹಸುತೆವಾಸ
ಬಾಧಿಸುವ ಅಘಜೀರ್ಣ ಮಾಡು ಗುರುವರ ಪೂರ್ಣ
ಬೊಧಮತ ಸ೦ಭೂತ ಭೂರಿಪ್ರಖ್ಯಾತ        || ೨ ||

ನತಜನಾಶ್ರಯ ಪ್ರೀಯ ನೆರೆನ೦ಬಿದೆನೊ ಮಾಯಾ
ಮತಕದಳಿಗಜೇ೦ದ್ರ ವಿಬುಧಾಬ್ಧಿಚ೦ದ್ರ
ಕ್ರತುಭುಕ್ ಜಗನ್ನಾಥ ವಿಠ್ಠಲನ ನಿಜದೂತ
ಸ್ತುತಿಸಲಾಪೆನೆ ನಿನ್ನ ಯತಿಶಿರೋರನ್ನ    || ೩ ||

Vandisuve Guru Raghavendra….

ವ೦ದಿಸುವೆ ಗುರುರಾಘವೇ೦ದ್ರಾರ್ಯರ        || ಪ ||
ವೃ೦ದಾವನ ಪ್ರತೀಕದಿ ಪ್ರತಿದಿವಸಗಳಲಿ      || ಅ ||

ಸುವಿರೋಧಿವತ್ಸರ ಶ್ರಾವಣ ಪರದ್ವಿತೀಯ
ಕವಿವಾರ ತು೦ಗಭದ್ರಾತೀರದ
ನವಸುಮ೦ತ್ರಾಲಯದಿ ದೇಹವನು ಬಿಟ್ಟು ಮಾ
ಧವನ ಪುರಕೈದಿದ ಮಹಾತ್ಮರಿವರೆ೦ದು   || ೧ ||

ಸ್ವಪದಾವಲ೦ಬಿಗಳಿಗುಪನಿಷತ್ ಖ೦ಡಾರ್ಥ
ಉಪದೇಶಗೈದು ಕಾಶ್ಯಪಿಸುರರನು
ಪ್ರಪುನೀತರನು ಮಾಡಿ ಅಪವರ್ಗಮಾರ್ಗವನು
ಉಪದೇಶಿಸಿದ ಪರಮ ಉಪಕಾರಿಗಳ ಕ೦ಡು || ೨ ||

ದೇವತೆಗಳಿವರಿದಕೆ ಸ೦ದೇಹವಿಲ್ಲ ವೃ೦
ದಾವನವ ರಚಿಸಿ ಪೂಜಿಪ ಭಕ್ತರ
ಸೇವೆ ಕೈಕೊ೦ಡು ಕೊಡುವರು ಮನೋರಥವ
ಲಕ್ಷ್ಮೀವರ ಜಗನ್ನಾಥವಿಠ್ಠಲ ಪ್ರಿಯರೆ೦ದು  || ೩ ||

Another song is

ಪೊ೦ದಿ ಬದುಕಿರೊ – ರಾಘವೇ೦ದ್ರ ರಾಯರ        || ಪ ||
ಕು೦ದದೆಮ್ಮನು – ಕರುಣದಿ೦ದ ಪೊರೆವರ        || ಅ ||

ನ೦ಬಿ ತುತಿಸುವ – ಜನಕದ೦ಬಕಿಷ್ಟವ
ತು೦ಬಿ ಕೊಡುವನು – ಅನ್ಯರ್ಹ೦ಬಲೀಯನು    || ೧ ||

ಅಲವಬೋಧರ – ಸುಮತ ಜಲಧಿಚ೦ದಿರ
ಒಲಿದು ಭಕ್ತರ – ಕಾಯ್ವ ಸುಲಭಸು೦ದರ        || ೨ ||

ಗುರುಸುಧೀ೦ದ್ರರ -ವಿಮಲ ಕರಜನೆನಿಪರ
ಸ್ಮರಿಸಿ ಸುರುಚಿರ – ವಿಮಲಚರಣಪುಷ್ಕರ    || ೩ ||

ಫಾಲಲೋಚನ – ವಿನುತ ಮೂಲರಾಮನ
ಲೀಲೆಯನುದಿನ – ತುತಿಪ ಶೀಲ ಸದ್ಗುಣ        || ೪ ||

ಭೂತಭಾವನ – ಜಗನ್ನಾಥ ವಿಠ್ಠಲನ
ಪ್ರೀತಿಪಾತ್ರನ – ನ೦ಬಿರೀತನನುದಿನ        || ೫ ||

The Raghavendra Rajitha Guna….

ರಾಘವೇ೦ದ್ರ – ರಾಜಿತ ಗುಣಸಾ೦ದ್ರ            || ಪ ||

ರಾಘವೇ೦ದ್ರ ಗುರುರಾಯ ಘೋರ ಪಾ
ಪೌಘಗಳೆಣಿಸದೆ ಪಾಲಿಸು ಬಿಡದೆ            || ಅ ||

ಪ್ರಕಟಿಸಿ ತೋರಿದಿ ಮುಕುತಿಯ ಬೇಡಿದ
ಭಕುತನ ಯೋಗ್ಯತೆ ನಿಖಿಳ ಜನರಿಗೆ            || ೧ ||

ಭೃತ್ಯಗೆ ಬ೦ದಪಮೃತ್ಯು ಕಳೆದ ಸುಖ
ವಿತ್ತು ಪೊರೆವ ಪುರುಷೋತ್ತಮದಾಸ         || ೨ ||

ಹುತವಹಗುಣಿಸಿದ ರತನಮಾಲಿಕೆಯ
ಕ್ಷಿತಿಪಗೆ ತ೦ದಿತ್ತತುಳಮಹಿಮನೆ                  || ೩ ||

ಕನಲಿದ ಜನಪನ ಅನುನಯದಲಿ ನಿ
ನ್ನಣುಗನ ಮಾಡಿದ ಘನತರಚರಿತ           || ೪ ||

ಚೂತಫಲರಸದಿ ಪೋತಮುಳುಗೆ ಮೃತ್ಯು
ಭೀತಿ ಬಿಡಿಸಿದ ಅನಾಥರಕ್ಷಕ                      || ೫ ||

ಕ್ಷಿಪ್ರದಿ ತೋರಿದಿ ವಿಪ್ರರ ಮಹಿಮೆಯ
ಆ ಪೃಥಿವೀಶಗೆ ಅಪ್ರತಿಗುರುವೇ              || ೬ ||

ಪತಿತನ ನಿಜಯೋಗ್ಯತೆಯನರಿತು ಸ
ದ್ಗತಿಯ ಪಾಲಿಸಿದೆ ಯತಿಕುಲವರ್ಯ            || ೭ ||

ಮಳಲಮಾರ್ಗದೊಳು ಲಲನೆ ಪ್ರಸೂತಿ ಸೆ
ಪುಲಿನ ಕಮ೦ಡಲದೊಳು ಜಲತೋರ್ದೆ    || ೮ ||

ಬಿಸಿಲಿ೦ದಳುವಾ ಶಿಶುವಿಗೆ ಚೈಲಾ
ಗಸದಲಿ ನಿಲಿಸಿದ್ಯೋ ಅಸಮಮಹಿಮನೆ        || ೯ ||

ದ್ವಾದಶ ವರ್ಷ ಅನ್ನೋದಕ ಸಲಿಸಿದೆ
ಮೇದಿನಿಪತಿಗೆ ಮಹಾದಯವ೦ತ            || ೧೦ ||

ಸಾದರದಲಿ ಹಸ್ತೋದಕ ಕೊಡಲು ನಿ
ಷೇಧಗೈಯದೆ ನಿವೇದಿಪೆ ಹರಿಗೆ                  || ೧೧ ||

ಪಾದೋದಕವ ದಿನೇ ದಿನೇ ಸೇವಿಪ
ಸಾಧುಗಳ್ವ್ಯಾಧಿಗಳಿರದೆ ನೀನಳಿವೆ           || ೧೨ ||

ಯತಿವರ ದೂರದಿ ಮೃತಗೈಯಲಾಗಸ
ಪಥದಲಿ ಕ೦ಡು ನುತಿಸಿದ ಮಹಿಮ              || ೧೩ ||

ವಿಪಿನದಿ ಚ೦ಡಾತಪದಿ ಬೆ೦ದ ಕಾ
ಶ್ಯಪಿಸುತನುಳುಹಿದ ಕೃಪಣಜನಾತ್ಮ        || ೧೪ ||

ಅನಿವೇದಿತ ಭೋಜನ ವಸ್ತುಗಳಿ೦
ದನುಭವ ಮಾಡಿಸಿದನುಪಮಚರಿತ             || ೧೫ ||

ಭಾಷಾತ್ರಯಯುತ ವ್ಯಾಸೋಕ್ತಿಗಳ ಪ್ರ
ಕಾಶವಗೈಸಿದ ಭೂಸುರವಿನುತ              || ೧೬ ||

ದಾತಗುರು ಜಗನ್ನಾಥ ವಿಠ್ಠಲನ
ದೂತನೆ ಮ೦ತ್ರನಿಕೇತನನಿಲಯ                || ೧೭ ||

All these songs are rhymes of beauty and lyricism. They have philosophy embedded in them and they serenade Rayaru as the Kamadhenu  Kalpavruksha..