This is a beautiful composition on Raghavendra Swamy by Lakshmipathi Vittala.
The style here is simple and the language too is easy to understand. The composition lists out the greatness of Rayaru and starts with the words that this is Raghavendra.
ಈತನೇ ಗುರು ರಾಘವೇಂದ್ರಾ – ಖ್ಯಾತ ಕಾಣಿರೋ || ಪ ||
ವಾತಮತದುಗ್ದಾಬ್ಧಿ ಚಂದ್ರ ಸು-ಖಾತಿಶಯಗಳ ನೀವ ನಿರುತ || ಅ ||
ಹಿಂದೆ ಹೇಮಕಶ್ಯಪನ ಸುತ
ನೆಂದು ಕರೆಸಲು ಓಂ ನಮಃ ಶಿವ
ಎಂದು ಬರೆಯಲು ಹೇಳಲಾಪಿತನು
ನಾರಾಯಣನೆ ಪರನೆಂದು ಬರೆಯಲು ರೋಷದಲಿ ಖಳನು
ತೋರೆಲವೊ ಸ್ಥಂಭದಿ ಇಂದು ನಿನ್ನನು
ಕಾವದೇವರನು ಎಂದೆನ್ನಲವನು
ಇಂದಿರೇಶನ ದ್ವಂದ್ವರೂಪವ
ಅಂದುತೋರಿದ ಮಹಿಮನೋ || ೧ ||
ವ್ಯಾಸಮುನಿಯಾಗವತರಿಸಿ ಜೀ
ವೇಶರೊಂದೆಂಬ ಮಾಯಿಗಳ ಕು
ಭಾಷ್ಯಗಳೆಲ್ಲ ತಾ ಕೆಡಿಸಿ – ಸರ್ವಜ್ಞ ಶಾಸ್ತ್ರವ
ಲೇಸಿನಲಿ ಸಜ್ಜನಕೆ ಬೊಧಿಸಿ – ದುರ್ವಾದಿಗಳ ಸ
ಚ್ಛಾಸ್ತ್ರವೆಂಬಸಿಯಲ್ಲಿ ಖಂಡ್ರೀಸಿ
ಹರಿಪ್ರೀತಿಗೊಳಿಸಿ
ಕೇಶವನೆ ಪರನೆಂದು ಸಾರುತ
ದಾಶರಥಿನಿಜದಾಸ್ಯ ಪಡೆದ || ೨ ||
ವರಹದಂಷ್ಟ್ರಯುಗಳ ಸು
ತೀರದಲಿರುವ ಮಂತ್ರಾಲಯದ ಸ್ಥಳದೀ
ಸುರರು ಮಾಡುವ ಪರಮ ಆರಾಧನೆಯ ಕೈಗೊಳ್ಳುತಾ
ತ್ರಿವಿಧರ್ಗೆತಕ್ಕ ವರಗಳನು ದಿನದಲ್ಲಿ ನೀಡುತ್ತ
ಜಗದೊಳು ಪುನೀತಾ
ಗುರು ಸುಧೀಂದ್ರಸುತೀರ್ಥರ ಸಿರಿ
ಕರಕಮಲ ಸಂಜಾತ – ಪ್ರೀತಾ || ೩ ||
ಮೆರೆವ ದ್ವಾದಶನಾಮ ಮುದ್ರೆಯು
ಕರದಿ ದಂಡಕಮಂಡಲು ಶ್ರೀ
ತರಳ ತುಳಸಿ ಸರವು ಕೊರಳಲ್ಲಿ – ಶ್ರೀ
ಹರಿಯ ಧ್ಯಾನವು ನಿರುತ ಮಾಡುತ ಮನದಲ್ಲಿ
ಸುಕ್ಷೇತ್ರತೀರ್ಥಕ್ಕೆ ಸರಿಮಿಗಿಲು ಎನಿಸುತ್ತಲಿಹರಿಲ್ಲಿ
ಇವರ ಅಂಘ್ರಿಯಲೀ
ನಿರುತ ಸೇವೆಮಾಳ್ಪ ಜನರಿಗೆ
ಪರಮಸುಖಗಳನೇ ಕೊಡುವರಿಲ್ಲಿ || ೪ ||
ಚತುರವಿಧ ಫಲಗಳನು ಕೊಡುತ
ಯತಿಶಿರೋಮಣಿ ನಾಮದಲಿ ಶ್ರೀ
ಪತಿಯು ತಾನೇ ಚಕ್ರರೂಪದಲೀ – ಇವರಲಿ ನಿಂತು
ಕೃತಿಯ ನಡೆಸುವ ಸರ್ವಕಾಲದಲೀ – ಈ ಮಹಿಮೆಯನು ನಾ
ತುತಿಸಬಲ್ಲೆನೆ ಅಲ್ಪಮತಿಯಲ್ಲೀ-
ಸದ್ಭಕ್ತಿಯಲೀ
ತುತಿಸುವರ ಪಾಲಿಸುವ ಲಕ್ಷ್ಮೀ
ಪತಿವಿಠ್ಠಲ ಸತ್ಕರುಣದಲ್ಲಿ || ೫ ||