The Hanuman composition of Rayaru

Raghavendra Swamy or Rayaru (1595-1671) is perhaps one of the most well-known saints in the world and his fame has spread far and wide.

A staunch Dwaitha, Raghavendra Swamy was a scholar par excellence. He has several works to his credit. Tow of his most famous songs are “Indu Enage Govinda” which he composed when he saw Sri Krishna at Udupi.

Another famous song is the one on Vayu Devaru or Hanuman. In his previous avatar as Vyasa Raja, he had consecrated 732 idols of Hanuman all over the VijayanagarKingdom.

As Raghavendra Swamy, he consecrated three idols of  Hanuman. There is also an idol of Hanuman in front of his Brindavana in Mantralaya. This idol was consecrated by his successor to the Mantralaya Matha, Yogendra Theertha (1671-1688).

Here is the Kannada lyrics of the composition on Hanuman composed by Rayaru.    

 

ಧ್ರುವತಾಳ
ಮರುತನಿನ್ನಯ ಮಹಿಮೆ ಪರಿಪರಿಯಿಂದ ತಿಳಿದು |
ಚರಿಸಿದ ಮನುಜನಿಗೆ ದುರಿತಬಾಧೆಗಳ್ಯಾಕೆ |
ಸರಸಿಜಾಸನಸಮ ಶಿರಿದೇವಿ ಗುರುವೆಂದು |
ಪರತತ್ತ್ವಹರಿಯೆನುತ ನಿರುತ ವಂದಿಸಿ ಅಖಿಲ |
ಭರಿತನಾಗಿಪ್ಪೆ ಜಗದಿ ಅರಸಿ ಭಾರತಿ ಸಹಿತ |
ಹೊರಗಿದ್ದ ನವಾರ್ಣವದೊಳಗೆ ಜೀವರ ಬೀಜ|
ಸರಿಬಂದ ವ್ಯಾಪಾರದಿ ಆಡಿಸುವೆ ಜಡಜೀವರನು |
ಪುರಹರ ಮೊದಲಾಗಿ ತೃಣಜೀವಕಡೆಯಾಗಿ|
ಅರಿಯರು ಒಂದು ಕಾರ್ಯ ಗುರುವೆ ನಿನ್ನಯ ಹೊರತು |
ಹೊರಗೆ ಗೊಂಬೆಗಳತೋರಿ ಒಳಗೆ ಥರಥರದಿ ನೀನು|
ಇರುವೆ ಸರ್ವರಿಗೆ  ಆಧಾರರೂಪದಿ  ಅತಿ |
ಸ್ಥಿರ  ಭಕುತಿಯಿಂದ ಹರಿಯಧೇನಿಸುತ |
ಮಿರುಗುವ ಪ್ರಭೆನಿನ್ನದು |
ಬರುವ ಹೋಗುವ ವ್ಯಾಪಾರ ನಿನ್ನದು ದೇವ |
ಭರದಿ ಶರಧಿಶಯನ ಶಿರಿವೇಣುಗೋಪಾಲರೇಯ |
ಪರಮಹರುಷದಿ ಲೀಲಾತೋರುವ ನಿನ್ನೊಳಿದ್ದು ||೧||

ಮಟ್ಟತಾಳ
ಅಖಿಲಾಗಮವೇದ್ಯ |
ಅಖಿಲಾಗಮಸ್ತುತ್ಯ |
ಅಖಿಲಾಗಮನಿಗಮ |
ವ್ಯಾಪುತದೇವನೆ |
ಅಖಿಲರೊಳಗೆ ನಿಂದೆ ಸಕಲ ಕಾರ್ಯಗಳೆಲ್ಲ |
ಅಕುಟಿಲ ನಿನ್ನಾಗಿ |
ಮಾಡಿಸಿ ಮೋದದಿಂದ |
ಯುಕುತಿಯಿಂದ ಜಗವ ಅತಿಶಯವ ತಿಳಿದು |
ಲಕುಮಿಯನು |
ನೀನು ಕಾಣುವೆ ಸರ್ವದಾ |
ಭಕುತರೊಳಗೆ ನಿನ್ನ ತುತಿಸ ಬಲ್ಲವರಾರು |
ಭಕುತಿಗಭಿಮಾನಿ ಭಾರತಿಗಳವಲ್ಲ | 
ಭೃಕುಟಿವಂದಿತ ನೀನು ವೇಣುಗೋಪಾಲನ |
ಪ್ರಕಟದಿ ಬಲ್ಲದ್ದು ಅರಿಯರು ಉಳಿದದ್ದು ||೨||

ತ್ರಿಪುಟತಾಳ
ಪೃಥ್ವಿಶಬ್ದದಿ ಭೂತಮಾತ್ರಾ ಪರಿಣಾಮಗಳಲ್ಲಿ |
ಪ್ರತಿಪ್ರತಿ ರೂಪನಾಗಿ ಇರುತಿಪ್ಪೆ ಮಡದಿ ಸಹಿತ ಪ್ರಾ |
ಕೃತವಿಡಿದು ಸಕಲ ವ್ಯಾಪ್ತಿ ತಾತ್ವಿಕರಲ್ಲಿ ವ್ಯಾಪಾರ |
ನಿನ್ನದಯ್ಯ ಲೋಕವಂದಿತ ದೇವ |
ಶಾತಕುಂಭದಿಯಿಂದ ಬೊಮ್ಮಾಂಡವು ತಾಳ |
ನಿನಗೆ ಎಣೆಯೆನುತ ತೋರುವುದಯ್ಯ ಶ್ರೀ |
ಕಾಂತನಾದ ಶಿರಿ ವೇಣುಗೋಪಾಲನ |
ಪ್ರಿತಿಯಿಂದಲೆ ನಿನಗೆ ಒಲಿದೆ ಅಧಿಕನಾಗಿ ||೩||

ಅಟ್ಟತಾಳ
ಇರುತಿ ಎಲ್ಲ ಜಗದಾಧಾರಕನಾಗಿ |
ಇರಿತಿದ್ದ ಧಾರುಣಿಯೋಳಗೆ |
ಮೂರು ಅವತಾರಗಳು ಧರಿಸಿ |
ಕ್ರೂರರ ಸದೆದ್ದು ಮೀರಿದ ಕಾರ್ಯವೆ |
ಮೇರುನುಂಗುವವನಿಗೆ ಒಂದುಚೂರು ನುಂಗಲು |
ಶೂರತನವು ಏನು ಆರು ಬಣ್ಣುಪರೋ ವಿ|
ಚಾರಿಸಿ ನಿನ್ನನು ನಾರಾಯಣಕೃಷ್ಣ ವೇಣುಗೋಪಾಲನಾ|
ಧಾರ ದಿಂದಲಿ ಸೇವೆ ಬಾರಿಬಾರಿಗೆ ಮಾಳ್ಪೆ ||೪||

ಆದಿತಾಳ
ಒಂದು ಅವತಾರದಲಿ ಕೊಂದೆ ರಕ್ಕಸರ ಮತ್ತೊಂದು ಅವತಾರದಿ ಅಸುರವೃಂದ ಘಾತಿಸಿದೆ |
ನಂದ ತೀರಥರೂಪದಿಂದ ಸಕಲರಂದ ವಚನಗಳಕಡಿದು |
ನಂದದಲ್ಲಿ ಮೆರೆದೆ ತಂದೆ ಈ ಕೃತಿಗಳನು ನಿನ್ನಿಂದಾದದ್ದು ನೋಡಿ ಮಂದರೋದ್ಧಾರ ಸುಖಿಸುವ ಸಪುತದ್ವೀಪ |
ಸಿಂಧು ಸಪುತ ಏಕದಿಂದ ಹಾರುವನು |
ಮುಂದಿದ್ದ ಕಾಲಿವೆಯನಿಂದ  ನಿಂದು ತಾ ದಾಟಿದಂತೆ ಮಂದಮತಿಗಳು ಮನಕೆ ಏನೆಂದೆ ಎಲೋ ದೇವ |
ಸುಂದರಾಂಗನೆ ಸುಖದಿಂದ ಪೂರಿತ ವಾಯುನಂದನ ಹನುಮ ರಾಮನಿಂದಾಲಿಂಗನ  ಪಡೆದ |
ಬಂದು ವಂದಿಸಿದ ಗೋಪಿಕಂದಗೆ ಭೀಮ |
ನಂದಮೂರುತಿ ವ್ಯಾಸನಿಂದ ತತ್ತ್ವಗಳೆಲ್ಲ |
ಅಂದದಿ ಓದುವ ಅಮರೇಂದ್ರ ವಂದಿತ ಮಧ್ವ |
ತಂದೆ ಎನ್ನ ಬಿನ್ನಹ ಒಂದು ಲಾಲಿಸುವದು |
ಪೊಂದಿಭೂಪತಿಯ ಮನದಿಚ್ಚೆ ಬೇಡಿದಂತೆ |
ಇಂದು ಬೇಡುವೆ ಮನದಿಂದ ವಂದನೆ ಮಾಡುವೆ |
ಕುಂದದೆ ಎನ್ನಳಿಪ್ಪ ಮಂದಮತಿ ಕಳೆವಾದೆಂದು |
ಇಂದೀವರಾಕ್ಷ ಹೃದಯಮಂದರಿದೊಳು ನಿನ್ನ |
ಅಂದವಾದ ರೂಪ ಇಂದು ತೋರುವದೆನೆಗೆ |
ಸಿಂಧುಶಯನ ಶಿರಿವೇಣುಗೋಪಾಲನು |
ನಿಂದ ನಿನೋಳು ಲೀಲಾ ಒಂದೊಂದು ಮಾಳ್ಪ ಚಿತ್ರ ||೫||

ಜತೆ – ಪವನನಿನ್ನಯ ಪಾದ ಪೊಂದಿದ ಮನುಜನು|
ಜವನಪುರಕ್ಕೆ ಸಲ್ಲ ವೇಣುಗೋಪಾಲನು ಬಲ್ಲ ||೬||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s